¡Sorpréndeme!

ಪುನೀತ್ ರಾಜ್ ಕುಮಾರ್ ಫ್ಯಾಮಿಲಿ ಪವರ್ ಶೋ | 5 ಸ್ವಾರಸ್ಯಕರ ಸಂಗತಿಗಳು | Filmibeat Kannada

2017-11-25 8 Dailymotion

ಅಪ್ಪು 'ಫ್ಯಾಮಿಲಿ ಪವರ್' ಕಾರ್ಯಕ್ರಮದ 5 ಸ್ವಾರಸ್ಯಕರ ಸಂಗತಿ! ಪುನೀತ್ ರಾಜ್ ಕುಮಾರ್ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅವರ 'ಫ್ಯಾಮಿಲಿ ಪವರ್' ಕಾರ್ಯಕ್ರಮ ಇಂದಿನಿಂದ ಪ್ರಸಾರ ಆಗುತ್ತಿದೆ. 'ಫ್ಯಾಮಿಲಿ ಪವರ್' ಕಾರ್ಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ. ಪಕ್ಕಾ ಫ್ಯಾಮಿಲಿ ರಿಯಾಲಿಟಿ ಶೋ ಆಗಿರುವ 'ಫ್ಯಾಮಿಲಿ ಪವರ್' ತುಂಬ ವಿಭಿನ್ನವಾಗಿದೆ. ಅಂದಹಾಗೆ ಈ ಕಾರ್ಯಕ್ರಮದ ಕೆಲ ವಿಶೇಷತೆಗಳು. ಪುನೀತ್ ಅವರೇ ಹೇಳಿರುವ ಹಾಗೆ 'ಫ್ಯಾಮಿಲಿ ಪವರ್' ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ 'ಜನರಲ್ ನಾಲೆಜ್ ಬೇಡ, ಜನರ ನಾಲೆಜ್ ಸಾಕು' ನಿಮ್ಮ ಅಮ್ಮ, ಅಮ್ಮ, ಅಜ್ಜ, ಅಜ್ಜಿ ಹೀಗೆ ಕುಟುಂಬಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕಾರ್ಯಕ್ರಮದಲ್ಲಿ ಇರುತ್ತದೆ.ಕಾರ್ಯಕ್ರಮದಲ್ಲಿ ಎರಡು ಬೇರೆ ಬೇರೆ ಕುಟುಂಬಗಳ ನಡುವೆ ಸ್ಪರ್ಧೆ ನಡೆಯುತ್ತದೆ. ಒಟ್ಟು ನಾಲ್ಕು ಸುತ್ತು ಕಾರ್ಯಕ್ರಮದಲ್ಲಿ ಇರುತ್ತದೆ.